ಗುರುವಾರ, ಸೆಪ್ಟೆಂಬರ್ 30, 2010

ನಾಲ್ಕು ಹನಿಗಳು..

ಅಂದು ಆಕೆ
ನನ್ನೆದೆಯ
ಬೆಳಕಾಗಿ ಇದ್ದಳು
ಆದರೆ..
ಹೃದಯ ಇಂದು
ಸುಟ್ಟು ಉರಿದು
ಕರಕಲಾದ ಇದ್ದಲು !

......

ಮಿಂಚು....
ಸುರಿವ ಮಳೆಗೆ
ತೋಯ್ದ ಇಳೆಯ
ಮೈಯ ಸೊಬಗ
ಕಂಡು ವರುಣ
ಹರಿಸಿದ ಕಣ್ಣೋಟ.

......

ನನ್ನ ಹೃದಯವೀಗ
ಎಣ್ಣೆಯಿಲ್ಲದ ಬತ್ತಿ
ಗೆಳತೀ..
ನಿನ್ನಬಗೆಗಿನ
ನನ್ನಭಾವನೆಗಳು
ಹೋದ ಮೇಲೆ ಬತ್ತಿ !!

.......

ಮದುವೆಗೆ ಮೊದಲು
ಹೆಣ್ಣು,ಕಾಯಿ
ಮದುವೆಯಾದ ಬಳಿಕ
ಹಣ್ಣು, ತಾಯಿ !!
ಅಂದು ಅವಳು
ಬಂದು ನನ್ನ
ಹೃದಯ ಕೋಟೆಯನ್ನೇ
ಗೆದ್ದಳು
ಇಂದು ಅಲ್ಲಿ
ಎಲ್ಲ ಪಾಳು ಬಿದ್ದು
ಅದರ ತುಂಬಾ
ಗೆದ್ದಲು !

ಗುರುವಾರ, ಸೆಪ್ಟೆಂಬರ್ 9, 2010

ಹೀಗೇ ಅ(ಹ)ನಿಸಿದ್ದು.......!

ಹೊಗಳಿದನು ಹುಡುಗ
ನಿನ್ನ ಕಣ್ಣು ಕಮಲ
ಮೂಗು ಸಂಪಿಗೆ
ತುಟಿ ಗುಲಾಬಿ
ಮನಸು ಮಲ್ಲಿಗೆ ಹೀಗೆ....
ಹೃದಯ ಕೊಟ್ಟಳು ಹುಡುಗಿ
ಇದನ್ನೆಲ್ಲಾ ನಂಬಿ
ಅವನೋ ಹೂವಿಂದ ಹೂ
ಹಾರುವ ದುಂಬಿ..!

........

ಸಹಿಸಲಾಗದು ಬಿಸಿಲು
ಅಬ್ಬಾ..!ಸುಡುತಿರುವುದು
ನೆತ್ತಿ
ಯಾರು ಎಸೆದರೋ ಮೇಲೆ..!?
ಈ ಬೆಂಕಿಯುಂಡೆಯನು
ಎತ್ತಿ..!!

........

ನನ್ನವಳಿಗೀಗ
ನಾನೇನೂ ಮಾಡಿದರೂ
ಮಿಸ್ಟೇಕೇ..!
ಸ್ವಲ್ಪ ತಡವಾದರೂ ಸಾಕು
ಕೇಳುವಳು
ಲೇಟು ಇಷ್ಟೇಕೆ...??

.......

ಅವನಂದನು ಹುಡುಗಿಗೆ
ನಾ ನಿನ್ನ ಇರುವೆಯಾಗಿ
ಮುತ್ತಲೇನು..?
ಯಾಕೆಂದರೆ ಈ
ತುಟಿ ತುಂಬಾ ಜೇನು!!
ಅದಕಂದಳು ಜಾಣ ಹುಡುಗಿ
ನೀನಂದುಕೊಂಡಿದ್ದೆಲ್ಲಾ ಸುಳ್ಳು
ಅದು ಬರೀ ಜೊಲ್ಲು..!!

.......

ಅಂದು ಅವಳು ಬಂದು
ನನ್ನ ಹೃದಯ ಕೋಟೆಯನ್ನೇ
ಗೆದ್ದಳು..
ಇಂದು ಅಲ್ಲಿ
ಎಲ್ಲಾ ಪಾಳು ಬಿದ್ದು
ಅದರ ತುಂಬಾ
ಗೆದ್ದಲು...!

.......

ಹೃದಯವೆಂದರೆ....
ಮುಷ್ಟಿಯಳತೆಯೊಳಗೆ
ಸಮಷ್ಟಿಯ ಬದುಕಿಗೆ
ಉಸಿರು ನೀಡುವ
ಭಗವಂತನ
ಅದ್ಭುತ ಸೃಷ್ಟಿ..!