ಗುರುವಾರ, ಡಿಸೆಂಬರ್ 30, 2010

ಕೆಲವು ಹನಿಗಳು..

ಗೆಳತಿ ನೀನೆಂದರೆ ಯಾಕೋ
ಮೂಡಿದೆ ಕನಸು,ಕೂಡಿದೆ ಮನಸು
ಬೇರೆ ನಾ ಹೇಳುವುದೇನು..?
ಅರೆಕ್ಷಣ ಕೂಡಾ ನೀ ನೊಂದರೆ ಸಾಕು
ಕರಗುವ ಹೃದಯ,ಮರುಗುವ ಜೀವ
ಆ ನೋವಲ್ಲಿಯೇ ಬದುಕುವೆ ನಾನು !

...................

ಮಳೆಹನಿಯೊಂದು ಉರುಳಿ
ಕಡಲಾಳ ಸೇರಿ
ಆಗುವುದು ಸ್ವಾತಿಮುತ್ತು
ಕಣ್ಣೋಟವೊಂದು ಹೊಳೆದು
ಹೃದಯಗಳೆರಡು ಸೇರಿ
ಪ್ರೀತಿಯಾಗಿ ಬೆಳೆವ ಪರಿ
ಯಾರಿಗೇನು ಗೊತ್ತು..!

..................

ಅಗಣಿತ ತಾರೆಗಳಿದ್ದರೂ ಕೂಡಾ
ಬಾನಿಗೆ ಆ ಚಂದಿರನೊಬ್ಬನೇ ಸಾಕು
ಸಾವಿರ ಹುಡುಗಿಯರಿದ್ದರೂ ಎದುರಲಿ
ನನ್ನೀ ಬದುಕಿಗೆ ನೀನೊಬ್ಬಳೇ ಬೇಕು

...................

ನೀನಂದು ಸಿಕ್ಕಿದ್ದು,ಆಗ ನಕ್ಕಿದ್ದು
ಆಮೇಲೆ ಪ್ರೀತಿ ಉಕ್ಕಿದ್ದು
ಕೇವಲ ನಪ ಮಾತ್ರ..
ಹಾಗೆಯೇ ಕೊನೆಗೆ ದಕ್ಕಿದ್ದು
ನಿನ್ನ ನೆನಪು ಮಾತ್ರ..!

2 ಕಾಮೆಂಟ್‌ಗಳು:

  1. ಸರಳ ಸುಂದರ ಕವಿತೆ...
    "ಮಳೆಹನಿಯೊಂದು ಉರುಳಿಕಡಲಾಳ ಸೇರಿಆಗುವುದು ಸ್ವಾತಿಮುತ್ತುಕಣ್ಣೋಟವೊಂದು ಹೊಳೆದುಹೃದಯಗಳೆರಡು ಸೇರಿಪ್ರೀತಿಯಾಗಿ ಬೆಳೆವ ಪರಿಯಾರಿಗೇನು ಗೊತ್ತು..!"
    ಈ ಸಾಲುಗಳು ಮನ ಮುಟ್ಟುವಂತಿದೆ....


    --

    ಪ್ರತ್ಯುತ್ತರಅಳಿಸಿ