ಶನಿವಾರ, ಜುಲೈ 17, 2010

ಒಂದು ಸ್ವಗತ

ನಾಲ್ಕು ದಿಕ್ಕುಗಳಲ್ಲಿಯೂ ಬಿಗಿದ
ಚೌಕಟ್ಟಿನೊಳಗಿಂದ ನನ್ನ ಬಂಧನ
ಹೊರ ಜಗತ್ತಿನ ಬದುಕ ಸುತ್ತಿ
ಅನುಭವಿಸಲಾಗದ ನೋವು ಪ್ರತಿದಿನ !

ನನ್ನ ಕಣ್ಣಮುಂದೆಯೇ ಹಲ್ಲು-
ಗಿಂಜುವವರು,ಜೋಲು ಮೋರೆ
ಹೊತ್ತವರು,ತಲೆಯ ಮೇಲೆಯೇ
ಜಗವ ಹೊತ್ತಂತೆ ಚಿಂತೆಯವರು
ಹೀಗೆ,
ಕಂಡ ಮುಖಗಳು ಎಷ್ಟೋ!
ಎಲ್ಲರ ಪ್ರತಿಬಿಂಬವೆಂಬಂತೆ ನಾನು

ಗಂಟೆಗಟ್ಟಲೆ ಕಣ್ಣಮುಂದೆಯೇ
ಕಾಲ ವ್ಯರ್ಥಮಾಡಿ ನನ್ನ ಸಹನೆಗೆಡಿಸುವವರು
ಚೆಲ್ಲುನಗೆಯ,ಜಿಂಕೆ ಕಂಗಳ ಚೆಲುವೆಯರು
ನನ್ನ ನಿದ್ದೆಗೆಡಿಸುವವರು...!

ಇವರೆಲ್ಲರ ಜೊತೆಗೇ ನಾನೂ
ಬದುಕಬೇಕೆಂದು ತುಡಿವ ಮನಸು
ಎಲ್ಲ ಬಂಧನ ಕಳಚಿ,
ಚೌಕಟ್ಟಿನಿಂದ ಹಾರಿ ಜಿಗಿದ ಕ್ಷಣಕೇ
ಕನಸು ನುಚ್ಚುನೂರು!
ಈಗ
ನಾನೊಂದು ಕನ್ನಡಿ ಸಣ್ಣ ಚೂರು !!!!!!

3 ಕಾಮೆಂಟ್‌ಗಳು: