ಶುಕ್ರವಾರ, ಡಿಸೆಂಬರ್ 31, 2010

ಒಂಟಿ ಪಯಣ...

ಈ ಕಲ್ಲು ಮುಳ್ಳಿನ ದಾರಿಯಲ್ಲಿ
ಎಡವಿ ಕೊಡವಿ ನಡೆವ ವೇಳೆ
ಕೈ ಹಿಡಿವವರಿಲ್ಲದೆ ನಡೆದ
ದೂರವದು ಎಷ್ಟೋ...

ಬಗೆ ಬಗೆ ಕನಸಿನ ಗುಂಗಲಿ
ಮೈಮರೆತಾಗ ಸುಮ್ಮನೆ ಕಳೆದ
ಕ್ಷಣಗಳು ಕಾಡಿದ ನೆನಪದು ಒಂದಿಷ್ಟು..

ದಾರಿಯ ತುಂಬಾ ಕಣ್ಣಿಗೆ ಕಂಡ
ಬಣ್ಣದ ಹೂಗಳು ನೂರಾರು..
ಪಾಲಿಗೆ ಬರದೆ ಯಾರದೋ
ಮುಡಿಯೇರಿದ ಮೇಲೆ ನನ್ನೆದೆ
ಒಡೆದ ಕನ್ನಡಿ ಚೂರು..

ರಣಬಿಸಿಲಿನ ಬೇಗೆಗೆ ಬಾಯಾರಿದೆ
ಗಂಟಿಕ್ಕಿದೆ ದಾಹದಿ ಕೊರಳು
ಹುಡುಕಾಡಿದೆ ಜೀವ ತಣ್ಣನೆ ನೆರಳು

ದೂರದ ಗುರಿ ಸೇರುವ ತವಕದಿ
ಸಂಜೆಯಾಗುತಿದೆ ಈಗ..
ಒಂಟಿಯಾನವು ನನ್ನದು
ಜೊತೆಯಿರದ ಬದುಕ ತುಂಬಿದೆ
ಬರಿಯ ಮೌನ ರಾಗ ...

2 ಕಾಮೆಂಟ್‌ಗಳು:

  1. ಒಂಟಿತನದಲ್ಲಿ ಕೂಡ ನನಗೆ ನಾನೇ ಸ್ನೇಹಿತನು, ಒಡನಾಡಿಯು ಎಂದುಕ್ಕೊಂಡರೆ..ಬಹುಶಃ ಒಂಟಿತನ ಬಹಳವಾಗಿ ಕಾಡಲಾರದೇನೋ..ಸುಂದರವಾದ ಕವನ..ಅಭಿನಂದನೆಗಳು..

    ಪ್ರತ್ಯುತ್ತರಅಳಿಸಿ