ಶನಿವಾರ, ಫೆಬ್ರವರಿ 6, 2010

ಒಂದಿಷ್ಟು ಹನಿಗಳು

ಮಕ್ಕಳನ್ನು ಸಾಕಲು
ತಂದೆ ತಾಯಿ ಪಟ್ಟರು
ಬಹಳಷ್ಟು ಪರಿಶ್ರಮ
ಆದರೆ ಕೊನೆಗೆ
ಸೇರಿದರು ವೃದ್ಧಾಶ್ರಮ!

.............

ಅಂದು ಅವರಿಬ್ಬರೇ
ಆ ಕೋಣೆ ತುಂಬಾ
ನಗು
ಇಂದು ತೊಟ್ಟಿಲಲ್ಲಿ
ಜೊತೆಗೊಂದು
ಪುಟ್ಟ ಮಗು!

.............

ಭೂಮಿ ಸುತ್ತ ಚಂದ್ರ
ಸುತ್ತುವುದನು
ಕಂಡು ಸೂರ್ಯನಿಗೂ
ಎಷ್ಟೊಂದು
ಹೊಟ್ಟೆಯುರಿ?
ಅದಕಾಗಿಯೇ
ಸುಡುತ್ತಿದ್ದಾನೆ
ಈ ಪರಿ ಬಿಸಿಲು ಕಾರಿ!

.............

ನೀ ನನಗೆ ನಾ ನಿನಗೆ
ಕೈ ಹಿಡಿದು ನಡೆವ
ಹುಡುಗನ ನಂಬಿ
ಕೈ ಚಾಚಿದಳು ಹುಡುಗಿ
ಕೈ ಕೊಟ್ಟನು ಹುಡುಗ!

4 ಕಾಮೆಂಟ್‌ಗಳು:

  1. ಕವನಗಳು ಚೆನ್ನಾಗಿವೆ.. ಹನಿ ಹನಿ ಕೂಡಿದರೆ ಹಳ್ಲ.. ಬರೀತಾ ಇದ್ರೆ ಲೆಖನ ಸಮುದ್ರವಾದೀತು.. ಶುಭವಾಗಲಿ..

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ರವಿಕಾಂತ್,ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

    ಪ್ರತ್ಯುತ್ತರಅಳಿಸಿ
  3. ತುಂಬಾ ತುಂಬಾ ಇಷ್ಟವಾಯ್ತು ನಿಮ್ಮ ಕವನಗಳು...ಅದರಲ್ಲೂ "ಭೂಮಿ ಸುತ್ತ ಚಂದ್ರ ಸುತ್ತುವುದು"...ಅದ್ಬುತ ಕಲ್ಪನೆ.

    ಪ್ರತ್ಯುತ್ತರಅಳಿಸಿ